January 08, 2010

ಕನಸಿನಾರಂಭ

ತೆರೆದಿದೆ ಮನೆ ಓ ಬಾ ಅತಿಥಿ,
ಹೊಸ ಬೆಳಕಿನ, ಹೊಸ ಗಾಳಿಯಾ, ಹೊಸ ಬಾಳನು ತಾ ಅತಿಥಿ.

ನನಗೆ ತುಂಬಾ ಇಷ್ಟವಾದ ಸಾಲುಗಳು ಇವು. ರಾಷ್ಟ್ರಕವಿ ಕುವೆಂಪು ರಚನೆಯ ಈ  ಕವಿತೆಯನ್ನು 'ಹೊಸಬೆಳಕು' ಚಿತ್ರದಲ್ಲಿ ಉಪಯೋಗಿಸ್ಕೊಂಡಿದ್ದಾರೆ, ಎಂ ರಂಗರಾವ್ ಅವರ ಅದ್ಭುತ ಸಂಗೀತ ಹಾಗೂ ಎಸ್ ಜಾನಕಿ ಮತ್ತು ವಾಣಿ ಜಯರಾಂ ಅವರ ಮಧುರಾತಿಮಧುರ ಕಂಠದಿಂದ ಬಂದ ಈ ಹಾಡನ್ನು ಕೇಳ್ತಾ ಇದ್ರೆ ಎಂಥವನ ಮನಸ್ಸಿನಲ್ಲೂ  ಹೊಸ ಬೆಳಕು ಮೂಡಿ, ತಂಪು ಗಾಳಿ ಬೀಸಲು ಶುರುವಿಡುತ್ತದೆ.

ಒಂದು ಬ್ಲಾಗೇನಾದ್ರೂ ಶುರು ಮಾಡಿದ್ರೆ ಅದಕ್ಕೆ ಒಂದೆರಡು ಒಳ್ಳೆಯ ಆರಂಭಿಕ ಸಾಲುಗಳು ಇರಲಿ ಅಂತ ಅನ್ನಿಸ್ತು. ಅದಕ್ಕೆ ಈ ಸಾಲುಗಳನ್ನು ಸಾಲ ಪಡೆದು ಈ ಬ್ಲಾಗನ್ನು ಶುರು ಮಾಡ್ತಾ ಇದ್ದೀನಿ.
ಇಲ್ಲಿ ನನ್ನ ಅಭಿಪ್ರಾಯಗಳು, ಯೋಚನೆಗಳು, ಇಷ್ಟಾನಿಷ್ಟಗಳು, ಇತ್ಯಾದಿಗಳನ್ನು ಬರೆದು ನನ್ನ  ಧರ್ಮ-ಕರ್ಮಗಳನ್ನು ಪಾಲಿಸುತ್ತೇನೆ. ನೀವೆಲ್ಲ ಓದಿ, ಅವುಗಳಿಗೆ ನೀವು ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ತಿಳಿಸ್ತಾ ಇರಿ.

ಅಬ್ಬ!! ಕೊನೆಗೂ ನಾನೊಬ್ಬ ಬ್ಲಾಗಿಗನಾದೆ. :-)

11 comments:

  1. Naveen,

    Tamma blog nodi tumbha khushui aayitu....
    Tumba timeninda taavu blog shurumadabekinddiri, evatu blog nodi ananda aayitu...

    Tamma, e hosa jeevanada(!!) aarambhakka nanna shubhashayagalu...

    Nanna sanna salahe:
    Regular aayi, blog update maadi, shurumaduvaga idda josh dheergha kaladavarege maintain maadi...

    ALL THE BEST...

    ReplyDelete
  2. ಮಳೆರಾಯರೆ - ನಿಮ್ಮ ಜ್ಞಾನದ ಮಳೆ ಸುರಿಸಿ, ನಮ್ಮ ತಲೆಯನ್ನು ಸ್ವಲ್ಪ ತೇವಗೊಳಿಸಿ, ಶುಭವಾಗಲಿ.

    ReplyDelete
  3. @KP,

    Thumba thanks...
    Nimma salahena aadshtu paalisthini...
    Aarambha shooratvana muriyo prayatna manasaa maadthini :)

    ReplyDelete
  4. @Thote Gowda,
    ಧನ್ಯವಾದಗಳು ಗೌಡ್ರೆ, ನಿಮ್ಮ ಪ್ರೋತ್ಸಾಹ ಇರಲಿ.

    ReplyDelete
  5. Nice one naveen.. Happy blogging !!

    ReplyDelete
  6. ಬಹಳ ಚೆನ್ನಾಗಿದೆ ನಿಮ್ಮ ಕನಸು.. ಹೀಗೆಯೆ ಕನಸುಗಳ ಮಳೆಯಾಗುತಿರಲಿ..

    ReplyDelete
  7. Happy blogging :-)
    nimma second blog yaavaaga bareetiddiri?

    ReplyDelete
  8. @Srinidhi KP: Thank you..

    @Prasanna: Thank you.. aadashtu prayatna padthini :-)

    @shree: Thank you.. ati sheeghradalle baralide:-)

    ReplyDelete
  9. @naveen krishna(jaenugudu): dhanyavaadagalu.. :)

    ReplyDelete
  10. ನಾನು ನಿಜವಾಗಿಯೂ ನಿಮ್ಮ ಬ್ಲಾಗ್ ಓದುವದಕ್ಕೆ ಉತ್ಸುಕನಾಗಿದ್ದೇನೆ ,
    ಈ ಅತ್ಯುತ್ಸಾಹಿ ಹೃದಯಕೆ ನಿಮ್ಮ ಹರಿತವಾದ ಬರವಣಿಗೆ ಇಂದಾ ತಣಿಸಿ.
    ಸದಾ ನಿಮ್ಮ ಬ್ಲಾಗ್ ಅಪ್ಡೇಟ್ ಗೋಸ್ಕರ ಕಾಯ್ತಾ ಇರುತ್ತೇನೆ
    ಬಡಪಾಯಿ , ಈ ಧಡ್ಡ ಜೀವಕೆ ಸ್ವಲ್ಪಾ ಹೊಸತನ್ನು ಕಲಿಸಿ ಕೊಡಿ.

    ReplyDelete